ಜಿ ಪ್ರಶಾಂತ ನಾಯಕ ‍‍( ಮಾರ್ಚ್ ೧೨, ೧೯೭೯) ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡದ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ಕವನ, ಕತೆ, ಪ್ರಬಂಧ, ಸಂಶೋಧನೆ, ವಿಮರ್ಶೆ ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ಸಹಜತೆ ಮತ್ತು ಬದ್ಧತೆಯಿಂದ ವಿಚಾರಗಳನ್ನು ದಾಖಲಿಸುವ ಪ್ರಯತ್ನದಿಂದ ಮುಖ್ಯರಾಗುವ ಇವರು ಈಗಾಗಲೇ ಮೂವತ್ತಕ್ಕೂ ಹೆಚ್ಚುಕೃತಿಗಳನ್ನು ಬರೆದಿದ್ದಾರೆ. == ಜನನ, ಜೀವನ == ಜಿ ಪ್ರಶಾಂತ ನಾಯಕ ಇವರು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ 'ಪಾಳ್ಯ,' ಗ್ರಾಮದಲ್ಲಿ ೧೯೭೦ರಲ್ಲಿ ಜನಿಸಿದರು. ತಂದೆ ಡಾ. ಬಿ. ಗುರುಲಿಂಗ, ತಾಯಿ ಶ್ರೀಮತಿ ನಾಗವೇಣಿ. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಕುವೆಂಪು, ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು == ಕೃತಿಗಳು[ಬದಲಾಯಿಸಿ] == === ಪಿ.ಎಚ್ ಡಿ ಸಂಶೋಧನಾ ಪ್ರಬಂಧ === ಕೆ.ಎಸ್. ನರಸಿಂಹಸ್ವಾಮಿ ಕಾವ್ಯದ ಅಧ್ಯಯನ ೧೯೯೮ === ಕೃತಿಗಳು === ಪ್ರೀತಿ ಮತ್ತು ಸ್ಫೂರ್ತಿ (ಕವನಸಂಕಲನ - 1994) ಬಂಧ ಮತ್ತು ಸಂಬಂಧ (ಕಥಾ ಸಂಕಲನ - 1995) ನಿನ್ನೆಗಳ ಹಾದಿಯಲ್ಲಿ (ಕಥಾ ಸಂಕಲನ - 1999) ಭಾರತೀಯ ಕಾವ್ಯಮೀಮಾಂಸೆ (ಪರಿಚಯ - 2004) ಪ್ರೀತಿಯ ಬದುಕು (ಸಂಶೋಧನಾ ಪ್ರಬಂಧ - 2004) ಹೊಸಗನ್ನಡ ಸಾಹಿತ್ಯ (ವಿಮರ್ಶೆ - 2005) ಕೆ.ಎಸ್. ನರಸಿಂಹಸ್ವಾಮಿ ಕಾವ್ಯ (ಪರಿಚಯ - 2005) ಅನ್ನಿಸುವ ಅರ್ಥ (ವಿಮರ್ಶೆ - 2006) ಕನ್ನಡ ಸಾಹಿತ್ಯ ಮತ್ತು ದಲಿತ ಪರಂಪರೆ (ಕಿರು ಸಂಶೋಧನೆ - 2007) ಭಾವ-ಚಿತ್ರಗಳು (ವಿಮರ್ಶೆ - 2007) ಚಿಂತನ ಚಿತ್ತ (ವಿಮರ್ಶೆ - 2008) ನೀಂ ಮಹಚ್ಛಿಲ್ಪಿ ದಿಟಂ (ವಿಮರ್ಶೆ - 2009) ಕನ್ನಡ ಸಿನಿಮಾಲೋಕ (ಅವಲೋಕನ - 2009) ಪ್ರಾಚೀನ ಕನ್ನಡ ಗದ್ಯಸಾಹಿತ್ಯ (2010) ಆ....ಭಾವ ಆ....ಬದುಕು (ಪ್ರಬಂಧ - 2010) ಅರಿವಿನ ಅಕ್ಕರೆ (ವಿಮರ್ಶೆ - 2012) ಹೀಗಿದ್ದೆವು ನಾವು (ಕವನಸಂಕಲನ - 2012) ಕುವೆಂಪು : ಕಾವ್ಯ ಪದವಿವರಣ ಕೋಶ: ಸಂಪುಟ 1( 2012) ಕನ್ನಡ ಭಾಷೆ ಸಮಕಾಲೀನ ಸಮಸ್ಯೆಗಳು (2013) ನಾನಕ್ಕನೆನ್, ನಿನಗೆ ತಂಗೆ! (ವಿಮರ್ಶೆ - 2013) ಪ್ರೇಮ ನವೋದಯ (ವಿಮರ್ಶೆ - 2013) ಬೆಳಕಿನ ಬಯಲು (ವಿಮರ್ಶೆ - 2013) ಕುವೆಂಪು : ಖಂಡಕಾವ್ಯ-ಮಹಾಕಾವ್ಯ ಪದವಿವರಣ ಕೋಶ: ಸಂಪುಟ 2 (2014) ಘಟ್ಟಿವಾಳಯ್ಯ (2015) ಮನೆಯೊಳಗಿನ ಮಾಯೆ (ಕನ್ನಡ ಕಿರುತೆರೆ ಲೋಕ) (ವಿಮರ್ಶೆ - 2015) ಬದುಕು ಭಾವಗೀತೆ.... (ಅಂಕಣ ಬರಹಗಳು - 2015) ಅಂಬೇಡ್ಕರ್ ಮತ್ತು ಕುವೆಂಪು (2016) ದಾರ್ಶನಿಕರ ದಾರಿ (ವಿಮರ್ಶೆ - 2017) ವಚನಕಾರರು ಮತ್ತು ಅಂಬೇಡ್ಕರ್ (2017) ಸಿನಿ ಸಂಪದ (2018) ಮಾತು-ಮನನ (2018) ಆ ಬದುಕು ಭಾವ : ಚಿತ್ರಗಳು (2019) ವಾಲ್ಮೀಕಿ ಮತ್ತುರಾಮಾಯಣ– (2020) ರಾಜರ್ಷಿ ಭರತ(ನಾಟಕ) – (2021) == ಗೌರವ, ಪ್ರಶಸ್ತಿಗಳು == ಸಾಹಿತ್ಯ ಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರ ೨೦೨೦ ನೀಂ ಮಹಚ್ಛಿಲ್ಪಿ ದಿಟಂ’ ಕೃತಿಗೆ 'ಸ್ನೇಹ ಸೇತು' (ದಿನಾಂಕ: ೨೦-೧೨-೨೦೧೦, ಬೆಂಗಳೂರು) ಬದುಕು ಭಾವಗೀತೆ’ ಅಂಕಣಬರಹಕ್ಕೆ ೨೦೧೫ನೇ ಸಾಲಿನ ‘ಡಾ.ಹಾ.ಮಾ.ನಾಯಕ’ ಪ್ರಶಸ್ತಿ, ಕರ್ನಾಟಕ ಸಂಘ(ರಿ.)ಶಿವಮೊಗ್ಗ ಅಂಬೇಡ್ಕರ್ ಮತ್ತು ಕುವೆಂಪು ಕೃತಿಗೆ ‘ಎಲ್ ಬಸವರಾಜು ದತ್ತಿ’ ಪ್ರಶಸ್ತಿ == ಉಲ್ಲೇಖಗಳು == ://.///------//74517699.